ಸೆ.28ಕ್ಕೆ ದರ್ಶನ್ ಭವಿಷ್ಯ ಭಾಗಷಃ ನಿರ್ಧಾರ | ಮಾಫಿ ಸಾಕ್ಷಿಗೆ ದಿನಾಂಕ ನಿಗದಿ | National Nandi News
https://youtube.com/@nationalnandinews?si=1oVKu_wMLYdVmMXj
ಪ್ರದೋಶ್ ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿವರ್ತನೆಗೊಳ್ಳುವ ಮೂಲಕ ರೇಣುಕಾ ಸ್ವಾಮಿ ಪ್ರಕರಣಕ್ಕೆ ಅತ್ಯಂತ ಮಹತ್ವದ ತಿರುವು ದೊರೆತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರಂಭದಿಂದ ಅಂತ್ಯದ ವರೆಗೆ ಎಲ್ಲದಕ್ಕೂ ಐ ವಿಟ್ನೆಸ್ (ನೇರ ಸಾಕ್ಷಿ) ಹಾಗಾಗಿ ಪ್ರದೋಶ್ ಹೇಳಿಕೆ, ದರ್ಶನ್ ಮಾತ್ರವೇ ಅಲ್ಲದೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆಲ್ಲ ಉರುಳಾಗುವುದು ಖಾತ್ರಿ ಆಗಿದೆ. ಇದೇ ಕಾರಣಕ್ಕೆ, ಪ್ರದೋಶ್ ಹೇಳಿಕೆಯನ್ನು ಏನಾದರೂ ಮಾಡಿ ತಡೆಯುವ ಪ್ರಯತ್ನವನ್ನು ದರ್ಶನ್ ಪರ ವಕೀಲರು ಸತತವಾಗಿ ಮಾಡುತ್ತಲೇ ಇದ್ದಾರೆ. ಆದರೆ ಹೈಕೋರ್ಟ್ ಆಗಲಿ, ವಿಚಾರಣಾ ನ್ಯಾಯಾಲಯವಾಗಲಿ ಅವರ ಅರ್ಜಿಗಳನ್ನು ಮನ್ನಿಸಿಲ್ಲ. ಇದೀಗ ಅಂತಿಮವಾಗಿ ಪ್ರದೋಶ್ ಮಾಫಿ ಸಾಕ್ಷಿ ಹೇಳಿಕೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ ಹಾಜರಾಗಿ ಮಾಫಿ ಸಾಕ್ಷಿ ದಾಖಲಿಸುವಂತೆ ಪ್ರದೋಶ್ಗೆ ನ್ಯಾಯಾಲಯವು ಸಮನ್ಸ್ ನೀಡಿದೆ. 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಸಮನ್ಸ್ ಜಾರಿ ಮಾಡಿ ಆದೇಶ ಮಾಡಿದ್ದು, ಮುಂದಿನ ಸೋಮವಾರು ಪ್ರದೋಶ್ ನ್ಯಾಯಾಲಯದ ಎದುರು ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲಿದ್ದಾರೆ. ಈಗಾಗಲೇ ಕೆಲವು ಬಾರಿ ಮಾಫಿ ಸಾಕ್ಷಿ ನುಡಿಯಲು ಪ್ರದೋಶ್ ತಯಾರಾಗಿದ್ದರು. ಒಮ್ಮೆಯಂತೂ ನ್ಯಾಯಾಲಯಕ್ಕೆ ಹಾಜರಾಗಿ ಮರಳಿದ್ದರು. ಆದರೆ ಇದೀಗ ದಿನಾಂಕ ನಿಗದಿ ಆಗಿದ್ದು, ಈ ಬಾರಿ ದಿನಾಂಕ ಬದಲಾಗುವ ಸಾಧ್ಯತೆ ಅತ್ಯಂತ ವಿರಳ

ಇಂದಿನ 59ನೇ ಸಿಸಿಹೆಚ್ ಕೋರ್ಟ್ ಆದೇಶದ ಬಳಿಕವೂ ದರ್ಶನ್ ಪರ ವಕೀಲರು ಕಾಲಾವಕಾಶಕ್ಕಾಗಿ ಮನವಿ ಮಾಡಿದರು. ‘ಸುಪ್ರೀಂಕೋರ್ಟ್ಗೆ ನಾವು ಮೇಲ್ಮನವಿ ಸಲ್ಲಿಸಿದ್ದೇವೆ ಹಾಗಾಗಿ ಕಾಲಾವಕಾಶ ನೀಡಬೇಕು’ ಎಂದು ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಮನವಿ ಮಾಡಿದರು. ಆದರೆ ಅದಕ್ಕೆ ಸೊಪ್ಪು ಹಾಕದ ನ್ಯಾಯಾಧೀಶರು ಸುಪ್ರೀಂ ನಿರ್ದೇಶನ ಇರುವುದರಿಂದ ಪ್ರಕರಣವನ್ನು ಮುಂದೂಡಲು ಅಥವಾ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ
