ಸ್ಟಿಂಗ್ ಆಪರೇಷನ್ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ! ಕೈ ಪಾಳಯದಲ್ಲಿ ಸಂಚಲನ ಮೂಡಿಸಿದ ಮಾಜಿ ಸಿಎಂ

‘ಸ್ಟಿಂಗ್ ಮಾಡಿತ್ತಿದ್ದಾರೆ ಎಂಬುವುದು ಗೊತ್ತಿದೆ. ಆದರೆ, ಆದರೆ ಯಾರು ಮಾಡುತ್ತಿದ್ದಾರೆ ಎಂಬುದು ಗೊತ್ತಾಗಬೇಕು’ ಹೀಗಂದವರು ಮಾಜಿ ಸಿಎಂ ಸಿದ್ದರಾಮಯ್ಯ. ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕುರಿತಾಗಿ ನಡೆಯುತ್ತಿರುವ ಬೆಳವಣಿಗೆಯ ಬೆನ್ನಲ್ಲೇ ಮೌನ ಮುರಿದ ಸಿದ್ದರಾಮಯ್ಯ ಅವರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ
ಈ ನಡುವೆ ಸ್ಟಿಂಗ್ ಆಪರೇಷನ್ ಬಗ್ಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. “ರಾಜ್ಯದ ಸಿಎಂ ಆಗಿ, ಹಿಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದೀರಿ? ಯಾಕೆ ಮುಚ್ಚಿಡುತ್ತಿದ್ದಿರಾ? ರಾಜ್ಯದ ಸಿಎಂ ಆಗಿದ್ದವರನ್ನು, ಹಾಲಿ ಮುಖ್ಯಮಂತ್ರಿಯನ್ನು ಟ್ರ್ಯಾಪ್ ಮಾಡತಕ್ಕದ್ದು ಅಂದರೆ ಏನರ್ಥ? ಎಲ್ಲಾ ಮಾಹಿತಿ ಇದ್ದರೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ?.” ಎಂದು ಪ್ರಶ್ನಿಸಿದ್ದರು.
